Elohim Devane El-Shaddai Rajane | ಎಲೋಹೀಮ್ ದೇವನೇ ಎಲ್-ಷಡಾಯ್ ರಾಜನೇ | Kannada Lyrics
Ps Simon Moses
#114
Font
ನನ್ನ ಕರೆದವನೇ
ನಿನ್ನ ನಾಮವ ಸ್ತುತಿಸುವೆನು
ಈವರೆಗೂ ನಡೆಸಿರುವೆ
ಅಪ್ಪಾ ನಿನ್ನನೇ ಕೊಂಡಾಡುವೆನು (2x)
ನಾ ನಂಬಿದ ದಿನದಿಂದ
ನನ್ನ ಕೈಬಿಡದೆ ಕಾದಿರುವೆ
ನಾ ಸೋತು ಬಿದ್ದಾಗೆಲ್ಲ
ನನ್ನ ಎತ್ತಿ ಎತ್ತಿ ನಿಲ್ಲಿಸಿರುವೆ (2x)
ಎಲೋಹೀಮ್ ದೇವನೇ ಎಲ್-ಷಡಾಯ್ ರಾಜನೇ
ನಿನ್ನಂತೆ ಯಾರು ಇಲ್ಲ
ಸಾವನ್ನೇ ಗೆದ್ದವನೇ ನನ್ನ ಪ್ರಿಯ ಯೇಸುವೇ
ನಿನಗೆ ಸಮಾನರೇ ಇಲ್ಲ (2x)
Verse 1
ಪಾಪವನ್ನೆಲ್ಲ ಕ್ಷಮಿಸಿರುವೆ
ಶಾಪದ ಕಟ್ಟನ್ನು ಮುರಿದಿರುವೆ
ಸೈತಾನ ಬಂಧನದಿ ನನ್ನ ಬಿಡಿಸಿ
ನಿನ್ನ ಬಾಧ್ಯನಾಗಿ ಮಾಡಿರುವೆ (2x)
ಮಹಿಮೆಯ ವಸ್ತ್ರ ಕೊಟ್ಟು
ನನ್ನ ನ್ಯೂನತೆಯ ಮುಚ್ಚಿರುವೆ
ಕೃಪೆ ಮೇಲೆ ಕೃಪೆ ಕೊಟ್ಟು
ನನ್ನ ವೃದ್ಧಿಸಿ ಹೆಚ್ಚಿರುವೆ (2x)
||ಎಲೋಹೀಮ್..ದೇವನೇ..||
Verse 2
ವ್ಯಾಧಿಯಲ್ಲಿ ನೀನೇ ಸೌಖ್ಯದಾತ
ಕಷ್ಟದಲ್ಲಿ ನನ್ನ ವಿಮೋಚಕ
ಅಸಾಮಾನ್ಯನಾದ ತಂದೆ ನೀನೇ
ನನ್ನ ಬಲವಾದ ದುರ್ಗವು ನೀನೇ (2x)
ನೀನು ನನಗಾಗಿ ಇಟ್ಟ ಮೇಲುಗಳು
ಶ್ರೇಷ್ಠ ಶ್ರೇಷ್ಠವು
ನೀನು ನನ್ ಕುರಿತು ಇಟ್ಟ ಯೋಜನೆಗಳು
ಉನ್ನತ ಉನ್ನತವು (2x)
||ಎಲೋಹೀಮ್..ದೇವನೇ..||
-----------x-----------x-----------
Nanna karedavane
Ninna naamava stutisuvenu
Eevaregu nadesiruve
Appa ninnane kondaaduvenu (2x)
Naa nambida dinadinda
Nanna kaibidadae kaadiruve
Naa sotu biddagella
Nanna etti etti nillisiruve (2x)
Elohim Devane El-Shaddai Rajane
Ninnante yaaru illa
Saavanne geddavane nanna priya Yesuve
Ninage samaanare illa (2x)
Verse 1
Paapavannella kshamisiruve
Shaapada kattannu muridiruve
Saithaana bandhanadi nanna bidisi
Ninna baadhyanaagi maadiruve (2x)
Mahimeya vastra kottu
Nanna nyoonateya mucchiruve
Krupe mele krupe kottu
Nanna vruddhisi hecchiruve (2x)
||Elohim..Devane..||
Verse 2
Vyaadhiyalli neene soukhyadaata
Kashtadalli nanna vimochaka
Asaamaanyanada tande neene
Nanna balavaada durgavu neene (2x)
Neenu nanagaagi itta melugalu
Shreshta shreshtavu
Neenu nan kuritu itta yojanegalu
Unnata unnathavu (2x)
||Elohim..Devane..||