Enanu Kandu | ಏನನ್ನು ಕಂಡು | Kannada Lyrics
Ps Simon Moses
#121
Font
ಏನನ್ನು ಕಂಡು ನನ್ನನ್ನು ಪ್ರೀತಿಸಿದೆ
ನೀನ್ ಜೀವವನ್ನೆ ನನಗೆ ಕೊಟ್ಟೆ
ಏನನ್ನು ಕಂಡು ನನ್ನನ್ನು ಆರಿಸಿಕೊಂಡೆ
ನಿನ್ನ ಸೇವೆಗೆಂದು ನನ್ನನ್ನು ಕರೆದೆ (2x)
ನಿನ್ನ ಕೃಪೆಯ ಕಂಗಳಿಗೆ ನಾನು
ಉತ್ತಮನಾಗಿ ಕಂಡೆ ಏನು
ನಿನ್ನ ಹೃದಯದ ಬಾಂಧವ್ಯಕ್ಕೆ ನಾನು
ಸರಿಹೊಂದುವೆ ಎಂದು ಎಣಿಸಿದೆ ಏನೋ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಎಲ್ಲವು ನಿನ್ನಯ ಕೃಪೆ ಅಲ್ಲವೆ
ಪ್ರೀತಿಸುವೆನು ನಿನ್ನ
ಸೇವಿಸುವೆನು ನಿನ್ನ
ಆರಾಧಿಸುವೆ ನಿನ್ನ ಯೇಸುವೆ (2x)
Verse 1
ಅಂಧಕಾರ ದೊರೆತನದಿಂದ
ಅಗಮ್ಯವಾದ ಬೆಳಕಿನ ಕಡೆಗೆ
ಪ್ರಾಣ ಕೊಟ್ಟು ಎಳೆದದ್ದು ನಿನ್ ಕೃಪೆಯೆ
ಉಪಯೋಗಕೆ ಬಾರದ ನನ್ನ
ನಿನ್ ಮಹಿಮೆ ಹೊರುವಂತೆ
ಶಿಲ್ಪಿಯಂತೆ ರೂಪಿಸಿದ್ದು ನಿನ್ ಕೃಪೆಯೆ
ನಿನ್ನ ಕೃಪೆಯು ನನ್ನ ಕೈ ಹಿಡಿದು ನಡೆಸಿ
ಉನ್ನತಗಳಲ್ಲಿ ಕೂರೀಸಿತು
ನಿನ್ನ ದಯೆಯು ನನ್ನ ಪ್ರತಿ
ನ್ಯೂನತೆಯ ಮುಚ್ಚಿ ಅಲಂಕರೀಸಿ ಮೇಲೆತ್ತಿತು
||ಪ್ರೀತಿಸುವೆನು..ನಿನ್ನ..||
Verse 2
ನನಗಾಗಿ ನೀ ಮಾಡಿದ ಮೇಲುಗಳ ನೆನೆಸುವಾಗ
ನಾನು ನನ್ನ ಕುಟುಂಬವು ಎಷ್ಟರವರು
ವಂಶವನ್ನೆ ಅಳಿಸಲು ಬಂದ ದೈತ್ಯರನ್ನು ಇಲ್ಲದಾಗಿಸಿ
ಹೆಗಲ ಮೇಲೆ ಹೊತ್ತು ಮೆರೆಸಿದ್ದು ನಿನ್ ಕೃಪೆಯೇ
ಇಂದು ಏನಾಗಿರುವೇನೋ ಅದೆಲ್ಲವು ನಿನ್ ಕೃಪೆಯೆ
ನಿನ್ನ ಕೃಪೆ ಇಲ್ಲದೆ ನಾ ಬಾಳೆನು
ನನ್ನಲ್ಲಿರುವುದೆಲ್ಲ ನಿನ್ನ ಕೃಪೆಯ ದಾನ
ನಿನಗಾಗಿಯೇ ನಾ ಅಳುವೆನು
||ಪ್ರೀತಿಸುವೆನು..ನಿನ್ನ..||
--ಎಲ್ಲವು ನಿನ್ನಯ ಕೃಪೆ ಅಲ್ಲವೆ--
--ಎಲ್ಲವು ನಿನ್ನಯ ಕೃಪೆ ಅಲ್ಲವೆ--
-----------x-----------x-----------
Enannu kandu nannannu preetiside
Nin jeevavanne nanage kotte
Enannu kandu nannannu aarisikonde
Ninna sevegendu nannannu karede (2x)
Ninna krupeya kangalige naanu
Uttamanagi kande enu
Ninna hrudayada baandhavyakke naanu
Sarihonduve endu eniside enu
Ellavu ninnaya krupe allave
Ellavu ninnaya krupe allave
Preetisuvenu ninna
Sevisuvenu ninna
Aaradhisuve ninna Yesuve (2x)
Verse 1
Andhakaara doretanadinda
Agamyavaada belakina kadege
Praana kottu eledaddu nin krupeye
Upayogakke baarada nanna
Nin mahime horuvante
Shilpiyante roopisiddu nin krupeye
Ninna krupeyu nanna kai hididu nadesi
Unnatagalalli kurisitu
Ninna dayeyu nanna
prati Nyoonateya mucchi
Alankareesi melettitu
||Preetisuvenu..ninna..||
Verse 2
Nanagaagi nee maadida
Melugala nenesuvaaga
Naanu nanna kutumbavu eshtaravaru
Vamshavanne alisalu banda
Daityarannu illadaagisi
Hegala mele hottu meresiddu nin krupeye
Indu enaagiruveno adellavu nin krupeye
Ninna krupe illade naa baalenu
Nannalliruvudella ninna krupeya daana
Ninagaagiye naa aluve
||Preetisuvenu..ninna..||
-- Ellavu ninnaya krupe allave --
-- Ellavu ninnaya krupe allave --