Enisalu Agadashtu | ಎಣಿಸಲು ಆಗದಷ್ಟು | Kannada Lyrics
Ps Simon Moses
#116
Font
ಎಣಿಸಲು ಆಗದಷ್ಟು ಮೇಲನ್ನು
ನೀನು ನನಗಾಗಿ ತಂದವನೆ
ಗ್ರಹಿಸಲು ಆಗದಷ್ಟು ಕೃಪೆಯನ್ನು
ನನ್ನ ಬದುಕ್ಕಲ್ಲಿ ಇಟ್ಟವನೆ (2x)
ನಿನ್ ಕರ ನನ್ನೆಲ್ಲಾ
ಅಗತ್ಯವನ್ನು ಪೂರೈಸಿ ಪೋಷಿಸಿತು
ನಿನ್ ರಕ್ತ ನನ್ನೆಲ್ಲಾ
ಸ್ವಾಸ್ಥ್ಯವನ್ನು ಕಾಪಾಡಿ ರಕ್ಷಿಸಿತು
ಈ ವರೆಗೂ ಕಾದು ನಡೆಸಿ
ನನ್ನ ಉದ್ಧರಿಸಿದಾತನೆ
ಪೂರ್ಣ ಹೃದಯದಿ ನಿನ್ನ ಸ್ತುತಿಸುತ
ಆರಾಧಿಸ್ವೇ ಯೇಸುವೆ (2x)
||ಎಣಿಸಲು ಆಗದಷ್ಟು..||
Verse 1
ಕುಗ್ಗಿ ಹೋದಾಗೆಲ್ಲಾ
ಹೊಸ ಬಲದಿ ತುಂಬಿಸಿದೆ
ನನ್ನ ಕಾಲು ಜಾರಿದಾಗೆಲ್ಲ
ಎತ್ತಿ ಸ್ಥಿರವಾಗಿ ನಿಲ್ಲಿಸಿದೆ (2x)
ನಾ ಕೂಗಿ ಕರೆದಾಗೆಲ್ಲ
ನನ್ನ ಮೊರೆಗೆ ಉತ್ತರಿಸಿದೆ
ವೈರಿಯು ನಾಚುವಂತೆ ನನ್ನ ನಂಬಿಕೆ ಗೆಲ್ಲಿಸಿದೆ (2x)
||ಈ..ವರೆಗೂ..ಕಾದು..||
Verse 2
ನಾ ಪಡೆದ ಕಿರೀಟವೆಲ್ಲಾ
ನಿನ್ನ ಕೃಪೆಯ ಕೆತ್ತನೆ
ನಾ ಹೊಂದಿದ ಘನತೆಯೆಲ್ಲಾ
ನಿನ್ನ ಮಹಿಮೆಯ ಲೇಪನ (2x)
ನನ್ನಲ್ಲಿರುವ ಆಶೀರ್ವಾದವು
ನಿನ್ನ ಪ್ರೀತಿಯ ಕಾಣಿಕೆ
ನಾ ಏರಿದ ಪ್ರತಿ ಸ್ಥಾನವು
ನಿನ್ನ ದಯೆಯ ಕೊಡುಗೆ (2x)
||ಈ..ವರೆಗೂ..ಕಾದು..||
||ಎಣಿಸಲು ಆಗದಷ್ಟು..||
----------x----------x----------
Enisalu agadashtu melannu
Neenu nanagagi tandavane
Grahisalu agadashtu krupeyannu
Nanna badukalli ittavane (2x)
Nin kara nannella
Agatyavannu pooraisi poshisitu
Nin rakta nannella
Swaasthyavannu kaapaadi rakshisitu
Ee varegu kaadu nadesi
Nanna uddharisidaatane
Poorna hrudayadi ninna stutisuta
Aaraadhisuve Yesuve (2x)
||Enisalu agadashtu..||
Verse 1
Kuggi hodaagella
Hosa baladi tumbiside
Nanna kaalu jaaridaagella
Etti sthiravaagi nilliside (2x)
Naa koogi karedaagella
Nanna morege uttariside
Vairiyu naachuvante nanna
Nambike gelliside (2x)
||Ee..varegu..kaadu..||
Verse 2
Naa padeda kireetavella
Ninna krupeya kettane
Naa hondida ghanateyella
Ninna mahimeya lepana (2x)
Nannalliruva aasheervaadavu
Ninna preetiya kaanike
Naa eerida prati sthaanavu
Ninna dayeya koduge (2x)
||Ee..varegu..kaadu..|
||Enisalu agadashtu..||